Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಂಗಾರಿ ಚಿತ್ರೀಕರಣ ಮುಕ್ತಾಯ
Posted date: 21 Mon, May 2012 ? 03:02:26 PM

ಶಿವಶಂಕರ್ ಫಿಲಂಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎ.ಎಲ್ಲಪ್ಪ ನಿರ್ಮಿಸುತ್ತಿರುವ ಬಂಗಾರಿ ಚಿತ್ರಕ್ಕೆ ಕಳೆದವಾರ  ರಾಕ್‌ಲೈನ್ ಸ್ಟುಡಿಯೋದಲ್ಲಿ ಹಾಕಿದ್ದ ಡಾಬಾ ಸೆಟ್‌ನಲ್ಲಿ ನಾಯಕ ಯೋಗಿ ಹಾಗೂ ನೃತ್ಯ ಕಲಾವಿದರು ಅಭಿನಯಿಸಿದ ಹೇ ಚಂಗ್ ಚಂಗ್ಲು ಹುಡ್ಗೀರ‍್ನ ಯಾವತ್ತೂ ನಂಬ್ಯಾಡಿ ಎಂಬ ಹಾಡನ್ನು ಹಾಗೂ ನಂದಿನಿ ಲೇಔಟ್‌ನ ಗ್ರೌಂಡ್‌ನಲ್ಲಿ ಹಾಕಿ ಜಾತ್ರೆ ಸೆಟ್‌ನಲ್ಲಿ ನಾಯಕ ಯೋಗಿ, ನಾಯಕಿ ರಾಗಿಣಿ ಅಭಿನಯಿಸಿದ ಜೈ ಮಂಡೆ ಮಾದೇಶ, ಏ ತಂದೆ ಮಾದೇಶ, ಶರಣು ಬಂದೇವೊ, ಏಳೋ ಏಳೋ ಮಾದೇಸ ಎಂಬ ಹಾಡನ್ನು ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತು.
ಮಾ ಚ೦ದ್ರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಆರ್.ನಿರಂಜನ ಛಾಯಾಗ್ರಹಣ, ಎ.ಎಂ.ನೀಲ್ ಸಂಗೀತ, ಜಯಂತ್ ಕಾಯ್ಕಿಣಿ, ರಾಮ್ ನಾರಾಯಣ್, ವಿಜಯ ಭರಮಸಾಗರ ಸಾಹಿತ್ಯ, ಇಮ್ರಾನ್, ಮಾಲೂರು ಶ್ರೀನಿವಾಸ್, ಕಂಬಿ ರಾಜು ನೃತ್ಯ ನಿರ್ದೇಶನ, ಮಾಸ್ ಮಾದ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನವಿದೆ.  ಯೋಗೀಶ್, ರಾಗಿಣಿ, ಸಾಧು ಕೋಕಿಲ,  ದಂಡಪಾಣಿ, ಸುಮನ ಶೆಟ್ಟಿ, ರಮೇಶ್ ಭಟ್,  ಸ್ವಯಂವರ ಚಂದ್ರು,  ಸತ್ಯಪ್ರಿಯ ಶರತ್ ಲೋಹಿತಾಶ್ವ, ಗಣೇಶ್ ರಾವ್, ವೆಂಕಟೇಶ್ ಪ್ರಸಾದ್, ಬ್ಯಾಂಕ್ ಜನಾರ್ಧನ್, ಮೊದಲಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಂಗಾರಿ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.